Friday, January 29, 2010

ಪ.ಗೋ.ಪತ್ರಗಳು - ೩: Deadline meetiಸಿದಂತೆಯೂ ಆಯ್ತು - ಸ್ವಾರಸ್ಯದ ಅನುಭಾವವೂ ಆಯಿತು!











ಪ.ಗೋ. ಮತ್ತು ಹೆಚ್.ಆರ್.ನಾಗೇಶರಾಯರ ನಡುವಣ ಪತ್ರ ವ್ಯವಹಾರ ಕೇವಲ ಕಾರ್ಡುಗಳಿಗಷ್ಟೇ ಮೀಸಲಿತ್ತೆಂಬ ನನ್ನ ಊಹೆ ಸುಳ್ಳಾಯಿತು. ದೀರ್ಘ ಪತ್ರಗಳ ಗುಚ್ಛವೊಂದನ್ನು ಬಿಡಿಸುತ್ತಾ ಹೋದೆ. 27-11-1959ರಂದು ಪ.ಗೋ. ಬರೆದಿರುವ ಈ ಎಂಟು ಪುಟಗಳ ಪತ್ರದಲ್ಲಿ ಸ್ವಾರಸ್ಯದ ಅನುಭಾವ ಖಂಡಿತವಾಗಿಯೂ ನಿಮಗಾಗಬಹುದೆಂಬ ನಂಬಿಕೆಯಿಂದ ಯಥಾವತ್ತಾಗಿ ನಕಲಿಸಿದ್ದೇನೆ. ಇನ್ನು ಪ.ಗೋ. ಉಂಟು, ನೀವುಂಟು!


EMBARGO: NOT TO BE READ BEFORE 12 MIDNIGHT DEC 31 OF 1959ಪತ್ರದ ಮೊದಲ ಸಾಲಿನಲ್ಲಿ ಹೀಗೊಂದು ಮುನ್ಸೂಚನೆಯಿದ್ದರೂ 30-11-1959ರಂದು ಪತ್ರ ಸ್ವೀಕರಿಸಿದ ನಾಗೇಶರಾಯರು EMBARGOಗೆ ಕೇರ್ ಮಾಡದೆಯೇ ಓದಿ 17-12-1959ರಂದೇ ಮಾರೋಲೆ ಬರೆದು ಬಿಡುತ್ತಾರೆ!


ಗೆಳೆಯ ಹಾ.ರ.ನಾ.ರಾಯರಿಗೆ - ನಮಸ್ಕಾರಗಳು.


ನಿಮ್ಮ ಕೈಬರಹ ಕಂಡಾಗಲೇ ಬಂತು ಕೆಲವು ನ.ಪೈ.ಗಳಿಗೆ ಸಂಚಕಾರ ಎಂದುಕೊಂಡೆ. (ಕಳೆದ ಬಾರಿಯ postage ಸರಿಯಾಗಿತ್ತೆ?). ಒಂದು ಬಾರಿ ಬೇring ಮಾಡಬಾರದೇಕೆ? ಎಂದೆನಿಸುತ್ತದೆ. ಆದರೆ, ನನಗೇ ಹಿಂದಿರುಗಿಸಿದರೆ ಗತಿ? ನನ್ನ ವಿಳಾಸ ಬರೆಯದೆ ಕಳುಹುವ ಆಲೋಚನೆಯೂ ಬರುತ್ತಿದೆ ಒಂದೊಂದು ಬಾರಿ.


Deadline ನೆನಪು ಮಾಡಿ ಉಪಕಾರ ಮಾಡಿದಿರಿ. ಇಲ್ಲವಾದರೆ ಉತ್ತರಿಸೋಣ ಎಂದು ಸುಮ್ಮನಾಗಿ ಪತ್ರ ಪುಸ್ತಕಗಳಡಿ ಸೇರಿ ಮಾಯವಾಗುತ್ತಿತ್ತು. ಹೀಗೆಯೇ ಬರೆಯಬಹುದಿತ್ತೆನ್ನಿ - ಆದರೆ ವ್ಯಕ್ತಿ ಎದುರಿಗೇ ಕುಳಿತು ಪ್ರಶ್ನಿಸುತ್ತಿರುವಂತೆ (ಅಥವಾ ಕೆಲವು ನಿಮಿಷಗಳ ಮಿತಿಯ ದೂರವಾಣಿ ಕಾಂಡದ ಕರೆ ಮಾಡಿದಂತೆ) ಬರುವ ಸ್ವಾರಸ್ಯ ಹೀಗೇ ಬರೆದರೆ ಬರುವುದಿಲ್ಲವಲ್ಲ! ಅದಕ್ಕಾಗಿ deadline meetiಸಿದಂತೆಯೂ ಆಯ್ತು - ಸ್ವಾರಸ್ಯದ ಅನುಭಾವವೂ ಆಯಿತು ಎಂದುಕೊಂಡು ಈಗಲೇ, ಈ ರಾತ್ರಿಯೇ (ಗಾಬರಿಯಾಗಬೇಡಿ, ಇನ್ನೂ ಹನ್ನೊಂದು ಘಂಟೆ ...) ಬರೆಯುತ್ತಿದ್ದೇನೆ.


ಇನ್ನು ಪೀಠಿಕಾ ಪ್ರಕರಣದಲ್ಲೇ ಇರುವಾಗ, ಕಚೇರಿಯ manifold ಕಾಗದವಿದೆ. (ಬಹುಶಃ ಜೇಬಿನಲ್ಲಿ ಅಂಚೆ ಚೀಟಿಯ ವ್ಯವಸ್ಥೆಗೆ ಪೈಸೆಗಳೂ ಇರಬಹುದು ...). ಕೆಲವು ಪುಟಗಳಷ್ಟಾದರೂ ಬರೆದು ತುಂಬಿಸದಿದ್ದರೆ Lineage ಸಿಗದೆ ಬಾಕಿಯಾಗಬಹುದು ಎಂದು ಭಾವಿಸಿದ್ದೇನೆ. ಒಂದೊಂದು ಬಾರಿ ನಮ್ಮೊಳಗಿನ ಪತ್ರ ವ್ಯವಹಾರದ ಕ್ರಮ (ಅಂದರೆ ನಿಮ್ಮಿಂದ ಬರುವ ಅಂತರ್ದೇಶೀಯ ಮಾರೋಲೆಗಳನ್ನು ಉದ್ದೇಶಿಸಿಯಲ್ಲ) ನೋಡುವಾಗ ನನ್ನ ‘ಧೈರ್ಯ’ಕ್ಕೆ ನಾನೇ ಬೆರಗಾಗಿ ಭೇಷೆಂದು ಬೆನ್ನು ತಟ್ಟಿಕೊಳ್ಳುವಂತಾಗುತ್ತದೆ. ‘ತಾಯಿನಾಡು’ ಕಚೇರಿಯಲ್ಲಿ Leader - writer (ದ್ವಯಾರ್ಥವೆನ್ನಿ, ಬೇಕಾದರೆ) ಆಗಿದ್ದಾಗ ಒಬ್ಬಿಬ್ಬರ ಹೊರತು ಉಳಿದವರಿಗೆ ನಾಗೇಶರಾಯರು unapproachable ಎಂಬ ಭಾವನೆ ಮೂಡಿತ್ತು. (ನಾನು ಅದಕ್ಕೆ ಹೊರತಾಗಿರಲಿಲ್ಲ). ಅಂತಹವರೊಡನೆ ಈಗ ಧೈರ್ಯವಾಗಿ ಹರಟೆಯೋಪಾದಿಯಲ್ಲಿ ಪತ್ರಿಸುವ ರೀತಿ ಕಂಡಾಗ, ನನ್ನದೊಂದು aಚೀವ್ಮೆಂೈಟ್ (ಇಲ್ಲದ ಕ್ರಮದಲ್ಲಿ ಎಚೀವ್ಮೆಂಕಟ್) ಇದು ಎಂದೆನ್ನಬೇಡವೆ? ಈಗಲೂ ಒಂದು ಧೈರ್ಯ - audacityಗಾಗಿ ಸಿಟ್ಟು ಬಂದು ಮುಖ ಕೆಂಪಾದರೂ ಕಾಣಿಸುವುದು ನನಗಲ್ಲವಲ್ಲ ... ಪ್ರೇಮಾ ನಾಗೇಶರಾಯರಿಗೆ ತಾನೆ? (ಹೆಸರು ತಪ್ಪಿಲ್ಲವೆಂದು ನಂಬಿದ್ದೇನೆ)

ಅಂತೆಂಬಾಗ -


ಇದೋ ಆರಂಭಿಸುತ್ತೇನೆ ಇನ್ನು. ನಿಮ್ಮ ಪತ್ರದ clause by clause consideration.


ನನ್ನ ಪತ್ರಗಳಲ್ಲಿ ಸ್ವಾರಸ್ಯವಿರುತ್ತದೆ (ಎಷ್ಟಾದರೂ ಅದು light reading matter!) ಎಂಬುದು ನನಗೆ (capitalನ) ಗೊತ್ತಿರುವುದಿಲ್ಲವೆ? ಆದರೂ dull etc. ಎನ್ನುವುದು ಸಂಪ್ರದಾಯವೆಂದು ಹಾಗೆ ಬರೆದೆ. ಆದರೆ ನಿಮ್ಮ ಬಳಿ formality - 240 ಮೈಲಿ ದೂರದಲ್ಲಿರುವಾಗ - ಬೇಡವೆಂದು ಯಾರಿಗೆ ನೆನಪಾಗಿತ್ತು! ಆದರೆ ನೀವು ಹಿಂದಿನ ಪತ್ರಕ್ಕೆ ಇತ್ತ ಮನ್ನಣೆ ನನ್ನ ತಲೆಯೊಳಗೆ ಹೋಗಿದೆ (i.e., gone into my head) ಆದರೂ ನಿಮ್ಮ ಅಂಚೆ ನಿರೀಕ್ಷೆ ತಪ್ಪಬಾರದಲ್ಲ. ನನಗಾದರೆ ಮಿತ್ರಪತ್ರಾಗಮನ ಸಂಪಾದಕರ ಪತ್ರದೊಂದಿಗೆ ಆದ ಕಾರಣ, ಅನಿರೀಕ್ಷಿತವಾಗಿ ದೊರೆವ ಆನಂದ. (ಇಂದಿನ ಪತ್ರವೂ ಹಾಗೆಯೇ ಆಗಿತ್ತು!). ನಾನು ನಿರೀಕ್ಷಿಸುವುದು ‘ಪ್ರಿಯ ಸಂಪಾದಕರೇ!’ ಸಂಬೋಧನೆ. "ಗೆ ಗೋ" ಕಾಣ ಸಿಕ್ಕಾಗ ಸಂತೋಷವಾಗುತ್ತದೆ. ಇರಲಿ, ನಿಮಗೆ monthly n / letter promise ಮಾಡಿದುದು - reciprocate ಮಾಡಿಸಿಕೊಳ್ಳುವ ಆಸೆಯಿಂದಲೇ ಸ್ವಾಮೀ! ಅದರಲ್ಲಿ ಸಂದೇಹವೇನೂ ಇಲ್ಲ. ಏಕೆಂದರೆ, ತಮ್ಮ ಬರೆದ letterಗಳು (ನನ್ನ ಉತ್ತರಗಳೂ) ಯಾವಾಗಲೂ curt; familiarity bred contempt ತುಂಬಿದುದಾಗಿರುತ್ತವೆ. ಆದರೆ, ನಿಮ್ಮಿಂದ ಕೆಲವು ಉವಾಚ (- ನಾರದ)ಗಳಾದರೂ ಸಿಕ್ಕರೆ! [ನಾಗೇಶರಾಯರು ‘ತಾಯಿನಾಡು’ ಪತ್ರಿಕೆಗೆ ಆದಿನಗಳಲ್ಲಿ ‘ಟಿಯೆಸ್ಸಾರ್’ ‘ಪ್ರಜಾವಾಣಿ’ಗೆ ಬರೆಯುತ್ತಿದ್ದಂತೆ ‘ನಾರದ ಉವಾಚ’ ದೈನಿಕ ಟೀಕಾಂಕಣ ಬರೆಯುತ್ತಿದ್ದರು - ಸಂ.] ಅದೇ ಸಂತೋಷ. ಬೆಂಗಳೂರು ತಂಗಾಳಿಯ ಆನಂದವನ್ನೇ ಅನುಭಾವಿಸಿಕೊಂಡ ಹಾಗಾಗುತ್ತದೆ. Show steal ಮಾಡುತ್ತೀರಷ್ಟೆ!


ಇನ್ನು ನನ್ನ all absorbing portfolio ವಿಚಾರ:-ಬಹುಶಃ


ನೀವು ಪತ್ರ ಬರೆಯುತ್ತೀರೆಂದು ನಮ್ಮ publisher - cum - Mg. Directorರಿಗೆ ಸೂಚನೆ ಸಿಕ್ಕಿರಬೇಕು. ಇಲ್ಲವಾದರೆ ನಿನ್ನೆಯ ದಿನವಷ್ಟೆ ನನ್ನ ಕೆಲಸದ ವ್ಯವಸ್ಥೆಯನ್ನೇಕೆ ಬದಲಾಯಿಸಿದರು. ಈಗ ಸಂಪಾದಕರ ಪತ್ರ, weekly ವಿಭಾಗಗಳೊಂದಿಗೆ undesignated News Editor ಆಗಿದ್ದೇನೆ. ಒಂದು ಉಪಕಾರವಾಗಿದೆ. Continuous night shift ಇದ್ದುದು ಹೋಗಿ temporarily continuous (ಅಂದರೆ whims ಪ್ರಕಾರ ಇದ್ದಕ್ಕಿದ್ದಂತೆ ಬದಲಾವಣೆಯಾಗಲೂ ಬಹುದು) day shiftಗೆ ಬಿದ್ದಿದ್ದೇನೆ. ಒಂದಷ್ಟು ಸಿಗರೇಟ್ ವೆಚ್ಚ ಉಳಿಯಿತಾದರೂ ಬೇರೆ ವೆಚ್ಚ ಹೆಚ್ಚಿತು. ಆದರೆ, ದಿನಕ್ಕೆ ಅರ್ಧ ಘಂಟೆಯಾದರೂ ಬಾವಟೆ ಗುಡ್ಡೆಯ ಗಾಳಿ ತಿನ್ನಬಹುದು (ಸೆಕೆ ನಿವಾರಿಸಿಕೊಳ್ಳಬಹುದು). ಸಮುದ್ರದ ಕಡೆಗೇ ನೋಡುತ್ತಿರಬಹುದು. ("ರೀ, ... ನಾನೂ" ಎನ್ನುವವರೂ ".. ಪ್ಪಾ, ನಾನೂ" ಎನ್ನುವವರೂ ಮಂಗಳೂರಿಗೆ ಬರುವ ವರೆಗಾದರೂ!). ಸದ್ಯಕ್ಕಂತೂ, T' printerನಿಂದ - ಅದರಲ್ಲಿ ಬರುವ messageಗಳೂ ಅತ್ಯಲ್ಪ - ಕಾಗದ ಹರಿದು, ರಾತ್ರಿಯವರು ಬಿಟ್ಟಿದ್ದೇನಾದರೂ (ಅದು ಬೇಕಾದಷ್ಟ್ರಿರುತ್ತದೆ) ಇದ್ದರೆ ಅವುಗಳನ್ನು ನನ್ನ shiftನಲ್ಲಿರುವವರಿಗೆ ಹಂಚಿ ಕೊಟ್ಟು, ನಾನೂ ಬರೆದು ಹಾಕಿ, list ಮಾಡಿಟ್ಟು ಸಂಜೆ (ಅಂದರೆ 7 ಘಂಟೆಗೆ ... ಇದು ನಿಮ್ಮ ಹಾಗೆ cosmopolitan centre ಅಲ್ಲ) buzz offiಸುವುದು!


ಆರಂಭದ ದಿನ office ರಾಜಕೀಯ ಇಲ್ಲೂ ತಲೆ ಎತ್ತಿತೆನ್ನಿ. ನಮ್ಮ ಕೈಯಲ್ಲೇ ಬರೆಸುತ್ತಾನೆ - ಇವನು ಏನೂ ಬರೆಯುವ ಉದ್ದೇಶ (ಬಹುಶಃ) ಇಲ್ಲದಿರಬೇಕು ಎಂದು ಭಾವಿಸಿದ್ದ ಒಬ್ಬ fastest S.E. ಮಹಾಶಯ. ಉಳಿದಿಬ್ಬರು graduate muffs - ಅವರ ಬಗ್ಗೆ no comment. ಆದರೆ, ಪತ್ರ ಕತ್ತರಿ - weekly matter (quality ಕೇಳಬೇಡಿ) ಮುಗಿಸಿ "ಬಾರೋs ಮಗನs ನಾನೇನ ನಿನ್ಕಿಂತ ಉಳಿಕಿ ಅಂದ್ಕೊಂಡಿದೀs ಏನs!" ಎಂದುಕೊಂಡೇ ಸರಿಯಾಗಿ ಗೀಚಿದೆ - number of sheets ಸಾಕಷ್ಟು ಇತ್ತು. ಈ ದಿನವೂ ಹಾಗೆಯೇ ಆದ ಕಾರಣ "ಇದು ನಾನು ಗ್ರಹಿಸಿದಷ್ಟು ಹಾಳಲ್ಲ ಮಾರಾಯ್ರೆ" ಎಂದು ಸುಮ್ಮನಾಗಿದ್ದಾನೆ. ಅವನೊಬ್ಬ good worker - ಆದರೆ, ನನ್ನಿಂದಲೂ childish, ಅಲ್ದೆ ದೋಷ. ಉಳಿದಿಬ್ಬರು Bitt-ers (ಇದೂ bar ಭಾಷೆಯಲ್ಲ!). ನಿಜವಾಗಿ ನೋಡಿದರೆ ಈ ವ್ಯವಸ್ಥೆಯೇ ಒಳ್ಳೆಯದೆಂದು ಕಾಣುತ್ತದೆ.


ನಮ್ದು ಕಾಮ್ ಹೋಗಯಾ ಎಂದು ಇದ್ದುಬಿಡಬಹುದು. ಆದರೆ ಫ್ರಂಟ್ page display ಕುಲಗೆಟ್ಟು ಹೋಗುತ್ತದೆ ಎಂದೊಂದೇ ಬೇಸರ. "ಹೂಂ, ಮಾಲಿಕರಿಗೇ ಬೇಡವಾಗಿದೆ ಅದು, ನನಗೇಕೆ ಆ ಚಿಂತೆ" ಎಂದೆನಿಸುತ್ತಿದೆ ಒಮ್ಮೊಮ್ಮೆ. ಅವರಿಗಂತೂ advt ಒಂದೇ preoccupation. Adsಗೆ ಬೇಕಾಗಿ ಇದ್ದಕ್ಕಿದ್ದಂತೆ 2 ಪುಟ ಜಾಸ್ತಿ ಮಾಡುತ್ತಾರೆ ಒಂದೊಂದು ಬಾರಿ. ಸಾಯುವವರು - ನಾವಲ್ಲ, ನಮಗಂತೂ ದಿನಾಲೂ 6 ಕಾಲಂ matter (left overs) omit ಮಾಡುವುದೇ ಕೆಲಸ - ಕಂಪಾಸಿಟರು "ಫಡ್ಚ" ಆಗುತ್ತಾರೆ. ಇಲ್ಲೂ, Leader writer & ಅರ್ಥಗರ್ಭಿತ ವಾರ್ತೆ ಲೇಖಕರು - cum - Asst Editorರ good booksನಲ್ಲಿದ್ದೇನೆ. ಆದುದರಿಂದ ಒಂದು ರೀತಿ .........


ಇನ್ನುಳಿದ ರಾಜಕೀಯ ಮುಂದೆ ಎಂದಾದರೂ -----



- ಹಾಲ್ದೊಡ್ಡೇರಿ ಸುಧೀಂದ್ರ, ಬೆಂಗಳೂರು.






No comments:

Visitors to this page