
ಚಿತ್ರ ಕೃಪೆ : ಶ್ರೀ.ಹಾಲ್ದೊಡ್ಡೇರಿ ಸುಧೀಂದ್ರ, ಬೆಂಗಳೂರು.
ಬಲ್ಲಿರೇನಯ್ಯ:
೨೦೧೦ ರ ದಶಕದಲ್ಲಿ ಕ್ರಿಕೆಟ್ ತಂಡಗಳಿಗೆ ರಾಷ್ಟ್ರೀಯ, ಬಹುರಾಷ್ಟ್ರೀಯ ಸಂಸ್ಥೆಗಳು ಪ್ರಾಯೋಜಕರಾಗಿ ಸಹಾಯ ಮಾಡುತ್ತಿದ್ದಾರೆ.
೧೯೬೦ ರ ದಶಕದಲ್ಲಿ ಶ್ರೀ.ಕೃಷ್ಣ ಜನ್ಮ,ಚಂದ್ರಾವಳೀ ವಿಲಾಸ ,ಅಗ್ರಪೂಜೆ ಎಂಬ ಕಥಾಭಾಗವನ್ನು ಆಯೋಜಿಸಿ ಕ್ರಿಕೆಟ್ ತಂಡಕ್ಕೆ ಕರಾವಳಿಯ ಗಂಡುಗಲೆ ಯಕ್ಷಗಾನ ಸಹಾಯ ಮಾಡಿತ್ತು ಎಂದು ಕನ್ನಡ ನಾಡಿನ ಹಿರಿಯ ಪತ್ರಕರ್ತ 'ಸುದ್ದಿಜೀವಿ' ಬೆಂಗಳೂರಿನ ಶ್ರೀ. ಹೆಚ್.ಆರ್. ನಾಗೇಶ ರಾವ್ ಸಂಗ್ರಹದಲ್ಲಿದ ಮಂಗಳೂರಿನ ಅಂದಿನ ಕನ್ನಡ ಸಂಜೆ ದಿನಪತ್ರಿಕೆ "ವಾರ್ತಾಲೋಕ" ದಿನಾಂಕ ೧೪ ಡಿಸೆಂಬರ್ ೧೯೬೩ ರ ಆವೃತ್ತಿಯಿಂದ ತಿಳಿದು ಬಂದಿದೆ.